ಬಹುದಿನದಿಂದ ಉಸಿರುಬಿಗಿಹಿಡಿದು ಕಾಯುತ್ತಿದ್ದ ಕಾವೇರಿ ತೀರ್ಪು ಇಂದು(ಫೆ.16) ಹೊರಬಿದ್ದಿದೆ. ಕನ್ನಡಿಗರ ಜೀವನದಿ ಕಾವೇರಿ ನದಿ ನೀರಿನ ಹಂಚಿಕೆಯ ಕುರಿತು 2007 ರ ಕಾವೇರಿ ನ್ಯಾಯಾಧಿಕರಣದ ಐ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ. ಕರ್ನಾಟಕ ತಮಿಳುನಾಡಿಗೆ ಬಿಡುತ್ತಿದ್ದ 192 ಟಿಎಂಸಿ ಅಡಿ ನೀರನ್ನು ಕಡಿತಗೊಳಿಸಿ 177.75 ಟಿ.ಎಂಸಿ ಅಡಿ ನೀರನ್ನಷ್ಟೇ ಬಿಡಲು ಸುಪ್ರೀಂ ಆದೇಶಿಸಿದೆ. ಇದರಿಂದ ಕರ್ನಾಟಕ ಹೆಚ್ಚುವರಿ 14.25 ನೀರನ್ನು ಉಳಿಸಿಕೊಳ್ಳಬಹುದಾಗಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಹಲವರು ಟ್ವೀಟ್ ಮಾಡಿದ್ದು, ಕೆಲವರು ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದರೆ, ಮತ್ತಷ್ಟು ಜನ ಇದು ಕನ್ನಡಿಗರು ಖುಷಿ ಪಡುವ ವಿಚಾರವಲ್ಲ ಎಂದಿದ್ದಾರೆ.